

8th April 2025

ಕಲಬುರಗಿ :- ನಗರದ ಬಿಎಸ್ಏನ್ಎಲ್ ಬಡಾವಣೆ ಕೊಟ್ನೂರ್ (ಡಿ )ಯಲ್ಲಿ ದಿನಾಂಕ 6.4.2025 ರಂದು 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ್ ಶಾಸಕರು ದಕ್ಷಿಣ ಮತಕ್ಷೇತ್ರ ಗುದ್ದಲಿ ಪೂಜೆ ನೆರವೇರಿಸುವುದರ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜ್ಯ ಮಹಾಪೌರರಾದ ಶ್ರೀ ಎಲ್ಲಪ್ಪ ನಾಯ್ಕೋಡಿ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕಿಶೋರ್ ಗಾಯಕ್ವಾಡ್ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷರು, ಬಿಎಸ್ಎನ್ಎಲ್ ಬಡಾವಣೆಯ ಗೌರವ ಅಧ್ಯಕ್ಷರಾದ ಡಾ ಪಂಡಿತ್ ಕಾಂಬ್ಳೆ, ಮುಖಂಡರಾದ ಶ್ರೀ ಟಿ ವೈ ಎಲ್ಲಪ್ಪ, ಶ್ರೀ ಬಸಲಿಂಗಪ್ಪ ಎಸ್ ಬಿರಾದರ್, ಟಿ ರಾಘವೇಂದ್ರ, ದಿನೇಶ್ ದೊಡ್ಡಮನಿ, ವಿಜಯಕುಮಾರ್ ಕೋಬಾಳ್, ರೋಹಿದಾಸ್ ಶೀಲ ಮೂರ್ತಿ, ಶ್ರೀ ಕಮಲಾಕರ್ ದನ್ನಿ,ಮರಿಯಪ್ಪ ಹಾವೇರಿ,ಶ್ರೀ ಗೋಪಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಧನ್ಯವಾದಗಳು . ಶ್ರೀ ಕಿಶೋರ್ ಆರ್ ಗಾಯಕವಾಡ ಕಾಂಗ್ರೆಸ್ ಮುಖಂಡರು ಕಲ್ಬುರ್ಗಿ.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.